- ಪಾದಾಚಾರಿಯ ರಸ್ತೆ ದಾಟಿನ ಹತ್ತಿರ, ಪಾದಾಚಾರಿಯು ರಸ್ತೆಯನ್ನು ದಾಟಲು ಕಾಯುತ್ತಿರುವಾಗ, ನೀವು ಮಾಡಬೇಕಾದ್ದು?
ಉ. ವಾಹನವನ್ನು ನಿಲ್ಲಿಸಿ, ಪಾದಚಾರಿಗಳು ರಸ್ತೆ ದಾಟುವವರೆಗೆ ಕಾದು ಮುಂದೆ ಸಾಗುವುದು.
- ನೀವು ಕಿರಿದಾದ ಸೇತುವೆಯನ್ನು ಸಮೀಪಿಸುತ್ತಿರುವಾಗ ಮತ್ತೊಂದು ವಾಹನವು ಸೇತುವೆಯ ವಿರುದ್ಧ ಬದಿಯಿಂದ ಪ್ರವೇಶಿಸಿತ್ತಿರುವಾಗ ನೀವು ಮಾಡಬೇಕಾದ್ದು?
ಉ. ಮುಂಬರುತ್ತಿರುವ ವಾಹನವು ಸೇತುವೆಯನ್ನು ದಾಟುವವರೆಗೆ ಕಾದು ನಿಂತು, ನಂತರ ಮುಂದೆ ಚಲಿಸುವುದು.
- ವಾಹನವು ಅಪಘಾತಕ್ಕೊಳಗಾಗಿ ವ್ಯಕ್ತಿಯನ್ನು ಗಾಯಗೊಳಿಸಿದಾಗ, ನಿಮ್ಮ ಕರ್ತವ್ಯವೇನು?
ಉ. ಸಮಂಜಸವಾದ ಎಲ್ಲಾ ಕ್ರಮಗಳನ್ನು ಕೈಗೊಂಡು ಗಾಯಾಳು ವ್ಯಕ್ತಿಗೆ ವೈದ್ಯಕೀಯ ಚಿಕಿತ್ಸೆ ಕೊಡಿಸುವುದು ಮತ್ತು 24 ಗಂಟೆಗಳೊಳಗೆ ಹತ್ತಿರದ ಪೋಲೀಸ್ ಠಾಣೆಗೆ ವರದಿ ಮಾಡುವುದು.
- ಒಂದು ರಸ್ತೆಯು ಒನ್-ವೇ ಎಂದು ಸೂಚಿಸಲ್ಪಟ್ಟಿರುವಾಗ?
ಉ. ಹಿಮ್ಮುಖವಾಗಿ ವಾಹನ ಚಾಲನೆ ಮಾಡಬಾರದು.
- ನಿಮ್ಮ ಮುಂದಿರುವ ವಾಹನವನ್ನು ಹೇಗೆ ಓವರ್ ಟೇಕ್ ಮಾಡಬೇಕು?
ಉ. ವಾಹನದ ಬಲಬದಿಯ ಮುಖಾಂತರ
- ಒಂದು ವಾಹನವು ಮಾನವ ರಹಿತ (ಅನ್ ಗಾರ್ಡೆಡ್) ರೈಲ್ವೆ ಕ್ರಾಸಿಂಗ್ ಅನ್ನು ಸಮೀಪಿಸಿದ್ದು, ಕ್ರಾಸು ಮಾಡುವ ಮೊದಲು ವಾಹನ ಚಾಲಕನು ಮಾಡಬೇಕಾದ್ದು?
ಉ. ವಾಹನವನ್ನು ಎಡಬದಿಯಲ್ಲಿ ನಿಲ್ಲಿಸಿ, ವಾಹನದಿಂದ ಇಳಿದು ರೈಲ್ವೆ ಹಳಿಯ ಹತ್ತಿರ ಹೋಗಿ ಯಾವುದೇ ರೈಲು ಅಥವಾ ಟ್ರ್ಯಾಲಿ ಬರುತ್ತಿಲ್ಲವೆಂದು ಖಚಿತ ಪಡಿಸಿಕೊಳ್ಳಬೇಕು.
- ಸಾರಿಗೆ ವಾಹನವನ್ನು ನೀವು ಹೇಗೆ ಗುರುತಿಸುವಿರಿ?
ಉ. ವಾಹನದ ನೊಂದಣಿ ಫಲಕವನ್ನು (ನಂಬರ್ ಪ್ಲೇಟ್)ನೋಡಿ
- ಕಲಿಕಾ ಚಾಲನಾ ಅನುಜ್ಞಾ ಪತ್ರದ ವಾಯಿದೆ?
ಉ. ಆರು ತಿಂಗಳು
- ರಸ್ತೆಯಲ್ಲಿ ಪಾದಚಾರಿ ಮಾರ್ಗ ಇಲ್ಲದಿದ್ದಾಗ ಪಾದಚಾರಿಗಳು.
ಉ. ರಸ್ತೆಯ ಬಲಬದಿಯಲ್ಲೇ ನಡೆಯಬೇಕು
- ತಡೆರಹಿತ ಮಾರ್ಗವನ್ನು ಅವಶ್ಯವಾಗಿ ಈ ವಾಹನಗಳಿಗೆ ನೀಡುವುದು?
ಉ. ಅಂಬುಲೆನ್ಸ್ ಮತ್ತು ಫೈರ್ ಸರ್ವಿಸ್ ವಾಹನಗಳು
- ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿರುವ ವಾಹನಗಳಿಗೆ ದಾರಿಬಿಡುವ ಸಂದರ್ಭವವು?
ಉ. ನಿಮ್ಮ ಬಲಬದಿ
- ವಾಹನ ಚಾಲಕನು ತನ್ನ ವಾಹನವನ್ನು ಯಾವ ಸಂದರ್ಭದಲ್ಲಿ ಓವರ್ ಟೇಕ್ ಮಾಡಬಹುದು?
ಉ. ಮುಂದಿನ ವಾಹನದ ಚಾಲಕನು ಓವರ್ ಟೇಕ್ ಮಾಡಲು ಕೈ ಸನ್ನೆ ನೀಡಿ, ಅನುಮತಿ ನೀಡಿದ ನಂತರ
- ವಾಹನ ಚಾಲಕನು ತನ್ನ ವಾಹನವನ್ನು ರಸ್ತೆಯ ಮೇಲೆ ಚಾಲನೆ ಮಾಡಬೇಕಾಗಿರುವುದು?
ಉ. ರಸ್ತೆಯ ಎಡಬದಿ
- ವಾಹನವನ್ನು ರಾತ್ರಿಯ ವೇಳೆಯಲ್ಲಿ ರಸ್ತೆಯ ಬದಿಯಲ್ಲಿ ನಿಲ್ಲಿಸಿದಾಗ ?
ಉ. ಪಾರ್ಕಿಂಗ್ ಲೈಟ್ ಅನ್ನು ಹೊತ್ತಿಸಿರಬೇಕು
- ಫಾಗ್ ಲ್ಯಾಂಪ್ ಅನ್ನು ಉಪಯೋಗಿಸಿವ ಸಂದರ್ಭ?
ಉ. ಮಂಜು ಇರುವ ಕಡೆ
- ಜಿಬ್ರಾ ಲೈನ್ ಅನ್ನು ನಿರ್ದಿಷ್ಟ ಪಡಿಸಿರುವುದು?
ಉ. ಪಾದಚಾರಿಗಳು ದಾಟಲು
- ಅಂಬುಲೆನ್ಸ್ ವಾಹನವು ಸಮೀಪ ಬರುತ್ತಿರುವಾಗ?
ಉ. ವಾಹನ ಚಾಲಕನು ತನ್ನ ವಾಹನವನ್ನು ಎಡಬದಿಗೆ ಸರಿಸಿ ಅಂಬುಲೆನ್ಸ್ ವಾಹನಕ್ಕೆ ಹೋಗಲು ಹಾದಿಯನ್ನು ಸುಗಮಗೊಳಿಸುವುದು
- ಕೆಂಪು ಬಣ್ಣದ ಟ್ರಾಫಿಕ್ ಲೈಟ್ ಏನನ್ನು ಸೂಚಿಸುತ್ತದೆ?
ಉ. ವಾಹನವನ್ನು ನಿಲ್ಲಿಸುವುದು
- ಆಸ್ಪತ್ರೆಯ ಪ್ರವೇಶದ್ವಾರದಲ್ಲಿ ವಾಹನಗಳನ್ನು ನಿಲ್ಲಿಸುವುದು?
ಉ. ಸರಿಯಲ್ಲ
- ಜಾರುವ ರಸ್ತೆ ಚಿಹ್ನೆ ನೋಡಿದಾಗ ಚಾಲಕನು ಮಾಡಬೇಕಾದ್ದು?
ಉ. ಗೇರ್ ಅನ್ನು ಬದಲಿಸಿ ವಾಹನದ ವೇಗವನ್ನು ಕಡಿಮೆ ಮಾಡುವುದು
- ವಾಹನವನ್ನು ಯಾವ ಸಂದರ್ಭದಲ್ಲಿ ಓವರ್ ಟೇಕ್ ಮಾಡಬಾರದು?
ಉ. ಇತರರಿಗೆ ತೊಂದರೆಯಾಗುವ ಸಂದರ್ಭದಲ್ಲಿ ಅಥವಾ ಸಂಚಾರಕ್ಕೆ ಅಪಾಯ ಸಂಭವಿಸುವ ಸಂದರ್ಭದಲ್ಲಿ
- ತಿರುವನ್ನನು ಸಮೀಪಿಸುತ್ತಿರುವಾಗ ಓವರ್ ಟೇಕಿಂಗ್ ಮಾಡುವುದು?
ಉ. ಅನುಮತಿ ಇಲ್ಲ
- ಕುಡಿದು ವಾಹನ ಚಾಲನೆ ಮಾಡುವುದು?
ಉ. ಎಲ್ಲಾ ವಾಹನಗಳಲ್ಲೂ ನಿಷೇಧಿಸಿದೆ
- ಹಾರನ್ ಅನ್ನು ಯಾವ ಸಂದರ್ಭದಲ್ಲಿ ನಿಷೇಧಿಸಿದೆ?
ಉ. ಆಸ್ಪತ್ರೆ ಮತ್ತು ನ್ಯಾಯಾಲಯಗಳ ಹತ್ತಿರ
- ಹಿನ್ನೋಟದ ಕನ್ನಡಿಯ (ರೇರವ ವ್ಯೂವ್ ಮಿರರ್) ಉಪಯೋಗ?
ಉ. ಹಿಂದಿನಿಂದ ಬರುವ ಸಂಚಾರವನ್ನು ನೋಡಲು
- ವಾಹನವು ಚಲಿಸುತ್ತಿರುವ ಸಂದರ್ಭದಲ್ಲಿ ಹತ್ತುವುದು ಮತ್ತು ಇಳಿಯುವುದು?
ಉ. ಎಲ್ಲಾ ವಾಹನಗಳಲ್ಲೂ ನಿಷೇಧಿಸಿದೆ
- ವಾಹನ ನಿಲುಗಡೆಯನ್ನು ಅನುಮತಿಸಿರುವ ಸಂದರ್ಭ?
ಉ. ಪಾರ್ಕಿಂಗ್ ನಿಷೇಧಿಸದ ಸ್ಥಳದಲ್ಲಿ
- ವಾಹನಗಳಿಗೆ ಇಂಧನವನ್ನು ತುಂಬಿಸುವಾಗ?
ಉ. ಧೂಮಪಾನ ಮಾಡಬಾರದು
- ಮೊಬೈಲ್ ಫೋನ್ ಅನ್ನು ಯಾವ ಸಮಯದಲ್ಲಿ ಉಪಯೋಗಿಸಬಾರದು?
ಉ. ವಾಹನವನ್ನು ಚಾಲನೆ ಮಾಡುವಾಗ
- ಓವರ್ ಟೇಕಿಂಗ್ ನಿಷೇಧಿಸಿರುವ ಸಂದರ್ಭ?
ಉ. ಮುಂಬರುವ ರಸ್ತೆಯು ಸರಿಯಾಗಿ ಕಾಣಿಸದಿರುವಾಗ
- ಪಾದಚಾರಿಗಳು ಕಡಿದಾದ ತಿರುವು ಮತ್ತು ನಿಂತಿರುವ ವಾಹನದ ಹತ್ತಿರ ರಸ್ತೆಯನ್ನು ದಾಟಬಾರದು, ಕಾರಣ?
ಉ. ಸ್ವಲ್ಪ ದೂರದಲ್ಲಿರುವ ಇತರೇ ವಾಹನ ಚಾಲಕನಿಗೆ ರಸ್ತೆ ದಾಟುತ್ತಿರುವ ಪಾದಚಾರಿಗಳು ಕಾಣಿಸದೇ ಇರುವುದರಿಂದ
- ಸಾರಿಗೇತರ ವಾಹನಗಳಲ್ಲಿ ಕೊಂಡೊಯ್ಯಬೇಕಾದ ವಾಹನದ ದಾಖಲೆ ಪತ್ರಗಳೆಂದರೆ?
ಉ. ನೊಂದಣಿ ಪತ್ರ, ವಿಮೆ ಪತ್ರ, ತೆರಿಗೆ ಪಾವತಿ ರಸೀದಿ, ಚಾಲನಾ ಅನುಜ್ಞಾ ಪತ್ರ
- ನೀವು ಹೋಗುತ್ತಿರುವ ರಸ್ತೆಯಲ್ಲಿ ಎಡಬದಿಗೆ ವಾಹನವನ್ನು ತಿರುಗಿಸುವಾಗ ನೀವು ಮಾಡಬೇಕಾದ್ದು?
ಉ. ಎಡಕ್ಕೆ ತಿರುಗುವ ಸಿಗ್ನಲ್ ತೋರಿಸಿ ರಸ್ತೆಯ ಎಡಬದಿಗೆ ಬಂದು ನಂತರ ಎಡಕ್ಕೆ ತಿರುಗುವುದು
- ವಾಹನದ ಮಾಲಿನ್ಯ ಪ್ರಮಾಣಪತ್ರದ ವಾಯಿದೆ?
ಉ. 6 ತಿಂಗಳು
- ನೀವು ರಾತ್ರಿ ಹೈಬೀಮ್ ನೊಂದಿಗೆ ವಾಹನ ಚಾಲನೆ ಮಾಡುತ್ತಿರುವಾಗ ಮುಂದಿನಿಂದ ಮತ್ತೊಂದು ವಾಹನವು ಸಮೀಪಿಸಿದಾಗ ನೀವು ಮಾಡಬೇಕಾದುದು?
ಉ. ವಾಹನವು ಹಾದುಹೋಗುವವರೆಗೂ ಹೆಡ್ ಲೈಟ್ ಬೆಳಕನ್ನು ಡಿಮ್ ಮಾಡುವುದು
- ಚಾಲಕನು ತನ್ನ ಬಲಗೈಯನ್ನು ಹೊರಚಾಚಿ ಅಂಗೈಯನ್ನು ಕೆಳಗೆ ಮಾಡಿ ಹಲವು ಸಲ ಮೇಲೆ ಮತ್ತು ಕೆಳಗೆ ಆಡಿಸಿದರೆ ಏನೆಂದು ಸೂಚಿಸುತ್ತಿದ್ದಾನೆ?
ಉ. ವಾಹನದ ವೇಗವನ್ನು ಕಡಿಮೆ ಮಾಡುತ್ತಿರುವುದಾಗಿ
- ಚಾಲಕನು ಸ್ಕೂಲ್ ಟ್ರಾಫಿಕ್ ಚಿಹ್ನೆಯನ್ನು ರಸ್ತೆಯಲ್ಲಿ ನೋಡಿದಾಗ ಮಾಡಬೇಕಾದುದು?
ಉ. ವೇಗ ಕಡಿಮೆ ಮಾಡಿ, ಜಾಗರೂಕತೆಯಿಂದ ಮುಂದೆ ಹೋಗುವುದು
- ಮೋಟಾರ್ ಸೈಕಲ್ ಸವಾರನು ಎಡಕ್ಕೆ ತಿರುಗುವಾಗ ಮಾಡಬೇಕಾದುದು?
ಉ. ಎಡಗಡೆ ತಿರುಗುವ ಸಂಕೇತವನ್ನು ಬಲಗೈಯಿಂದ ತೋರಿಸುವುದು
- ಯು-ಟರ್ನ್ ಮಾಡುವಾಗ ತೋರಿಸಬೇಕಾದ ಸಿಗ್ನಲ್ ಏನು?
ಉ. ಬಲಕ್ಕೆ ತಿರುಗುವ ಸಿಗ್ನಲ್
- ಯಾವ ಸಂದರ್ಭದಲ್ಲಿ ಚಾಲಕನು ಯು-ತಿರುವನ್ನು ತೆಗೆದುಕೊಳಳಬಾರದು?
ಉ. ಸಂಚಾರ ದಟ್ಟಣೆ ಹೆಚ್ಚಚಾಗಿರುವ ರಸ್ತೆಯಲ್ಲಿ
- ಒಂದು ವಾಹನವನ್ನು ಓವರ್ ಟೇಕ್ ಮಾಡುವ ಮೊದಲು ಏನನ್ನು ದೃಢಪಡಿಸಿಕೊಳ್ಳಬೇಕು?
ಉ. ಮುಂದಿನ ರಸ್ತೆ ಸ್ಪಷ್ಟವಾಗಿ ಕಾಣುವಂತಿದ್ದು, ಓವರ್ ಟೇಕ್ ಮಾಡಲು ಸುರಕ್ಷಿತವೆನಿಸಿದಾಗ
- ಸರಕು ಸಾಗಣೆ ವಾಹನದ ಕ್ಯಾಬಿನ್ ನಲ್ಲಿ ಕೊಂಡೊಯ್ಯಬಹುದಾದ ವ್ಯಕ್ತಿಗಳ ಸಂಖ್ಯೆ?
ಉ. ನೊಂದಣಿ ಪ್ರಮಾಣಪತ್ರದಲ್ಲಿ ನಮೂದಾದಷ್ಟಯ ವ್ಯಕ್ತಿಗಳು
- ನಿಮ್ಮ ವಾಹನವನ್ನು ಓವರ್ ಟೇಕ್ ಮಾಡುತ್ತಿರುವಾಗ ನೀವು
ಉ. ಓವರ್ ಟೇಕ್ ಮಾಡುವ ವಾಹನಕ್ಕೆ ಅಡಚಣೆ ಮಾಡಬೇಡಿ
- ಹ್ಯಾಂಡ್ ಬ್ರೇಕ್ ನ್ನು ಬಳಸುವುದು
ಉ. ವಾಹನ ನಿಲುಗಡೆ ಮಾಡಿದಾಗ
- ದ್ವಿಚಕ್ರ ವಾಹನದಲ್ಲಿ ಇಬ್ಬರಿಗಿಂತ ಹೆಚ್ಚು ವ್ಯಕ್ತಿಗಳ ಪ್ರಯಾಣ?
ಉ. ಕಾನೂನಿನ ಉಲ್ಲಂಘನೆ
- ಆಸ್ಪತ್ರೆಯ ಬಳಿ ನೀವು ಒಂದು ವಾಹನವನ್ನು ಓವರ್ ಟೇಕ್ ಮಾಡುವಾಗ?
ಉ. ಹಾರನ್ ಮಾಡಬೇಡಿ
- ನೊಂದಣಿಯಾಗದ ವಾಹನವನ್ನು ಸಾರ್ವಜನಿಕ ರಸ್ತೆಯಲ್ಲಿ ಬಳಸುವುದು?
ಉ. ಕಾನೂನು ಬಾಹಿರ
- ಸಾರಿಗೆ ವಾಹನ ಚಾಲನೆ ಮಾಡಲು ಲೈಸನ್ಸ್ ಪಡೆಯಲು ಕನಿಷ್ಟ ವಯೋಮಿತಿ?
ಉ. 20 ವರ್ಷಗಳು
- ಈ ಸಂದರ್ಭದಲ್ಲಿ ಓವರ್ ಟೇಕ್ ಮಾಡುವುದು ನಿಷಿದ್ಧ
ಉ. ಕಿರಿದಾದ ಸೇತುವೆ ಮೇಲೆ
- ತನ್ನ ಬಳಿ ಇರುವ ಪ್ರಾಣಿಯು ತನ್ನ ನಿಯಂತ್ರಣ ತಪ್ಪುತ್ತಿದೆ ಎಂದು ತಿಳಿದು ನಿಲ್ಲಿಸಲು ಕೋರಿದರೆ?
ಉ. ಚಾಲಕ ವಾಹನವನ್ನು ನಿಲ್ಲಿಸಬೇಕು
- ಕೆಳಗಿನ ಯಾನ ಪ್ರಕರಣದಲ್ಲಿ ವಾಹನ ನಿಲುಗಡೆ ನಿಷೇಧಿಸಿದೆ.
ಉ. ರಸ್ತೆ ಸಂಚಾರ ನಿಯಂತ್ರಣ ದೀಪದ ಬಳಿ
- ಅತಿ ವೇಗ…….
ಉ. ಇದು ಅಪರಾಧ, ಚಾಲನಾ ಲೈಸನ್ಸ್ ಅಮಾನತ್ತು/ರದ್ಧತಿ ಮಾಡಲು ಎಡೆಮಾಡುತ್ತದೆ
- ಶಾಲಾ ವಾಹನಗಳು ವಿದ್ಯಾರ್ಥಿಗಳನ್ನು ಇಳಿಸಲು ಮತ್ತು ಹತ್ತಿಸಲು ನಿಲ್ಲಿಸಿದಾಗ
ಉ. ವಿದ್ಯಾರ್ಥಿಗಳು ಏಕಾಏಕಿ ರಸ್ತೆ ದಾಟುವ ಸಾಧ್ಯತೆ ಇರುವುದರಿಂದ ನಿಧಾನವಾಗಿ/ಎಚ್ಚರಿಕೆಯಿಂದ ಹೋಗಿ
- ಅಂಧ ವ್ಯಕ್ತಿಯು ಬಿಳಿ ಕೋಲನ್ನು ಹಿಡಿದು ರಸ್ತೆ ದಾಟುವಾಗ
ಉ. ವಾಹನ ಚಾಲಕನು ಬಿಳಿ ಕೋಲು ನೋಡಿ ವಾಹನ ನಿಲ್ಲಿಸುವ ಸಂಚಾರಿ ಸಂದೇಶ ಎಂದು ಭಾವಿಸಿ ವಾಹನ ನಿಲ್ಲಿಸಬೇಕು
- ವಾಹನವು ಅಪಘಾತಕ್ಕೆ ಒಳಗಾದಾಗ
ಉ. 24 ಗಂಟೆಗಳ ಒಳಗೆ ಹತ್ತಿರದ ಪೊಲೀಸ್ ಠಾಣೆಗೆ ವರದಿ ಮಾಡಬೇಕು
- ಅಪಘಾತವಾದ ಮೂರನೇಯ ವ್ಯಕ್ತಿಯ ಆಸ್ತಿ/ವಸ್ತು ನಷ್ಟ ಆದಾಗ
ಉ. 24 ಗಂಟೆಯೊಳಗೆ ಚಾಲಕನು ಹತ್ತಿರದ ಪೊಲೀಸ್ ಠಾಣೆಗೆ ವರದಿ ಮಾಡಬೇಕು
- ನಮ್ಮ ವಾಹನವನ್ನು ಹಿಂಬದಿಯ ವಾಹನ ಓವರ್ ಟೇಕ್ ಮಾಡಲು ಪ್ರಾರಂಭಿಸಿದಾಗ
ಉ. ನಾವು ಬೇರೆ ವಾಹನ ಓವರ್ ಟೇಕ್ ಮಾಡಬಾರದು
- ಮುಂದೆ ಇರುವ ವಾಹನದ ಚಾಲಕನು ಓವರ್ ಟೇಕ್ ಮಾಡಲು ಸೂಚನೆ ನೀಡದೇ ಇದ್ದಾಗ
ಉ. ನಾವು ಓವರ್ ಟೇಕ್ ಮಾಡಬಾರದು
- ನಮ್ಮ ವಾಹನವನ್ನು ಓವರ್ ಟೇಕ್ ಮಾಡುತ್ತಿರುವಾಗ
ಉ. ನಾವು ವೇಗವನ್ನು ಹೆಚ್ಚಿಸಬಾರದು
- ಈ ಸ್ಥಳಗಳಲ್ಲಿ ವಾಹನ ನಿಲುಗಡೆ ನಿಷೇಧಿಸಿದೆ
ಉ. ಆಸ್ಪತ್ರೆ ಪ್ರವೇಶದ್ವಾರ
- ಈ ಸ್ಥಳಗಳಲ್ಲಿ ವಾಹನ ನಿಲುಗಡೆ ನಿಷೇಧಿಸಿದೆ
ಉ. ಅಗ್ನಿಶಾಮಕ ವಾಹನಕ್ಕೆ ಅಡ್ಡದಾಗಿ
- ಮೋಟಾರು ಸೈಕಲ್ ನಲ್ಲಿ ಹಿಂಬದಿ ಸವಾರನನ್ನು ಕೊಂಡೊಯ್ಯಲು
ಉ. ವಾಹನವು ಫುಟ್ ರೆಸ್ಟ್, ಕೈಹಿಡಿಕೆ, ಮತ್ತು ಸೀರೆ ಗಾರ್ಡ್ ಹೊಂದಿರಬೇಕು
- ಸಾರ್ವಜನಿಕ ಸೇವಾ ವಾಹನ ಚಾಲನೆ ಮಾಡುವಾಗ ಧೂಮಪಾನ ಮಾಡುವುದು
ಉ. ಚಾಲನಾ ಅನುಜ್ಞಾ ಪತ್ರ ಅಮಾನತ್ತಿಗೆ ಅವಕಾಶವಾಗುತ್ತದೆ.
- ರಸ್ತೆಯಲ್ಲಿ ಕೆಟ್ಟುನಿಂತ ವಾಹನದಿಂದ ಸಾರ್ವಜನಿಕರಿಕೆ ಅಡಚಣೆಯಾದಾಗ
ಉ. ಚಾಲನಾ ಅನುಜ್ಞಾ ಪತ್ರವನ್ನು ಅಮಾನತ್ತು ಅಥವಾ ರದ್ದಿಗೆ ಅವಕಾಶವಾಗುತ್ತದೆ
- ಸಂಚಾರ ದೀಪ ಮತ್ತು ಪೊಲೀಸ್ ಇಲ್ಲದ ಕೂಡು ರಸ್ತೆಯ ಬಳಿ ನೀವು ಬಂದಾಗ ಮಾಡಬೇಕಾದುದು
ಉ. ನಿಮ್ಮ ಬಲಭಾಗದಿಂದ ಬರುವ ವಾಹನಗಳಗೆ ದಾರಿ ಬಿಟ್ಟು, ನಂತರ ಸೂಕ್ತ ಸಂಜ್ಞೆ ನೀಡಿ ಮುಂದುವರೆಯಿರಿ
- ನೀವು ಮಿನುಗುತ್ತಿರುವ ಹಳದಿ ಸಂಚಾರಿ ದೀಪದ ವೃತ್ತಕ್ಕೆ ಬರುವಾಗ
ಉ. ವಾಹನವನ್ನು ನಿಧಾನಗೊಳಿಸಿ ಮುಂದೆ ಸುರಕ್ಷಿತ ಎಂಬುದನ್ನು ದೃಢಪಡಿಸಿಕೊಂಡು ನಂತರ ಚಲಿಸಿ
- ರಸ್ತೆಯಲ್ಲಿ ನಿರಂತರವಾಗಿ ಹಳದಿ ಪಟ್ಟಿ ಹಾಕಿದ್ದಲ್ಲಿ ವಾಹನವು
ಉ. ಹಳದಿ ಪಟ್ಟಿಯನ್ನು ದಾಟಕೂಡದು
- ನೀವು ಏರು/ಇಳಿ ರಸ್ತೆಯಲ್ಲಿ ವಾಹನ ಚಾಲನೆ ಮಾಡುವಾಗ, ನೀವು
ಉ. ಏರುವ ವಾಹನಗಳಿಗೆ ಅವಕಾಶ ನೀಡಬೇಕು
- ಟ್ರಾಕ್ಟರ್ ನ ಚಾಲಕನು ಏನನ್ನು ಕೊಂಡೊಯ್ಯಬಾರದು
ಉ. ಚಾಲಕನನ್ನು ಬಿಟ್ಟು ಬೇರೆ ವ್ಯಕ್ತಿಯನ್ನು
- ಒಂದು ವಾಹನವು ಅಡ್ಡರಸ್ತೆಯಿಂದ ಮುಖ್ಯರಸ್ತೆ ಪ್ರವೇಶಿಸುವಾಗ ಚಾಲಕನು ಆದ್ಯತೆ ನೀಡಬೇಕಾದ ಅಂಶ
ಉ. ಮುಖ್ಯರಸ್ತೆಯಲ್ಲಿ ಬರುವ ಎಲ್ಲಾ ವಾಹನಗಳಿಗೆ ಅವಕಾಶ ನೀಡಬೇಕು
- ನೀವು ಒಂದು ವಾಹನವನ್ನು ಎಡದಿಂದ ಓವರ್ ಟೇಕ್ ಮಾಡುವುದಿದ್ದರೆ,
ಉ. ಚಾಲಕನು ತನ್ನ ಬಲಭಾಗಕ್ಕೆ ತಿರುಗಿ ರಸ್ತೆ ಮಧ್ಯದಲ್ಲಿ ಹೋಗುವುದಾಗಿ ಸೂಚನೆ ನೀಡಿದಾಗ
- ಅಧೀಕೃತ ಅಧಿಕಾರಿಯಿಂದ ಒಂದು ವಾಹನವನ್ನು ವಶಪಡಿಸಿಕೊಳ್ಳಬಹುದಾದ ಸಂದರ್ಭ
ಉ. ವಾಹನದ ಚಾಲ್ತಿಯಲ್ಲಿರುವ ನೊಂದಣಿ ಹಾಗೂ ಪರವಾನಿಗೆ ಇಲ್ಲದಿದ್ದಲ್ಲಿ
- ಯಾವ ತರಹದ ಹಾರನ್ ಬಳಸಬಹುದು
ಉ. ಎಲೆಕ್ಟಿಕ್ ಹಾರನ್
- ಯಾವ ರಸ್ತೆಯಲ್ಲಿ ರಿವರ್ಸ್ ಗೇರ್ ನಲ್ಲಿ ವಾಹನ ಚಾಲನೆ ಮಾಡುವುದನ್ನು ನಿಷೇಧಿಸಿದೆ
ಉ. ಏಕಮುಖ ರಸ್ತೆ
- ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿ ಚಾಲಕ ಸಿಕ್ಕಿಹಾಕಿಕೊಂಡಾಗ ಅವನು ಯಾವ ಶಿಕ್ಷೆಗೆ ಗುರಿಯಾಗುತ್ತಾನೆ
ಉ. 6 ತಿಂಗಳು ಸಜೆ ಅಥವಾ ರೂ.2000 ದಂಡ ಅಥವಾ ಎರಡೂ
- ನೀವು ವಾಹನ ಚಾಲನೆಗೆ ಕಲಿಕಾ ಅನುಜ್ಞಾ ಪತ್ರ ಹೊಂದಿದ್ದರೆ,
ಉ. ಚಾಲನಾ ಲೈಸನ್ಸ್ ಹೊಂದಿರುವ ವ್ಯಕ್ತಿಯನ್ನು ತರಬೇತಿ ಕಾರಣಕ್ಕಾಗಿ ತಮ್ಮ ಜೊತೆ ಕರೆದುಕೊಂಡು ಹೋಗಬಹುದು ಹೊರತು ಬೇರೆಯವರನ್ನು ಕರೆದೊಯ್ಯಲು ಸಾಧ್ಯವಿಲ್ಲ
- ಹಳದಿ ದೀಪ ಇರುವ ಸಂಚಾರಿ ದೀಪ ಹೊಂದಿದ ವೃತ್ತದಲ್ಲಿ ಆ ವೃತ್ತದ ಕಡೆ ಹೋಗುವ ವಾಹನ ಚಾಲಕ ಏನು ಮಾಡಬೇಕು
ಉ. ವಾಹನದ ವೇಗ ಕಡಿಮೆ ಮಾಡಿ ವಾಹನ ನಿಲ್ಲಿಸಿ
- ಎಲ್ಲಾ ಮೋಟಾರು ವಾಹನಗಳುಹೊಂದಿರಬೇಕು
ಉ. ಮೂರನೇ ವ್ಯಕ್ತಿಯ ವಿಮೆ
- ಮುಂದೆ ಹೋಗುತ್ತಿರುವ ವಾಹನದಿಂದ ಕಾಯ್ದುಕೊಳ್ಳಬೇಕಾದ ಕನಿಷ್ಟ ಅಂತರ
ಉ. ವೇಗರ ಆಧಾರದ ಮೇಲೆ ಸುರಕ್ಷಿತ ಅಂತರ
- ಖಾಸಗಿ ವಾಹನದಲ್ಲಿ ಕರೆದುಕೊಂಡು ಹೋಗಲು ಅನುಮತಿಸಲ್ಪಟ್ಟ ವಾಹನ ಸಾಮರ್ಥ್ಯವನ್ನು ಎಲ್ಲಿ ನಮೂದಿಸಲಾಗಿದೆ
ಉ. ನೊಂದಣಿ ಪ್ರಮಾಣ ಪತ್ರದಲ್ಲಿ
- ಯಾವ ಸಂದರ್ಭದಲ್ಲಿ ಓವರ್ ಟೇಕ್ ಮಾಡುವುದನ್ನು ನಿಷೇಧಿಸಿದೆ
ಉ. ವಾಹನವನ್ನು ಕಡಿದಾದ ಬೆಟ್ಟದಲ್ಲಿ ಚಾಲನೆ ಮಾಡುವಾಗ
- ರಸ್ತೆಯ ಮೇಲೆ ಬಿಟ್ಟು ಬಿಟ್ಟು ಬಿಳಿ ಪಟ್ಟಿ ಹಾಕಿದ್ದರೆ ಆಗ ನೀವು
ಉ. ಅವಶ್ಯವಿದ್ದಾಗ ಲೇನ್ ಬದಲಾವಣೆ ಮಾಡಬಹುದು
- ಮಿನುಗುವ ಕೆಂಪು ಸಂಚಾರಿ ದೀಪ ಇದ್ದರೆ ಅದರ ಅರ್ಥ
ಉ. ವಾಹನ ನಿಲ್ಲಿಸಿ ಸುರಕ್ಷಿತ ಎನಿಸಿದರೆ ಮುಂದೆ ಸಾಗಿ
- ಸುರಕ್ಷಿತ ಚಾಲನೆ ಎಂದರೆ ಏನು
ಉ. ಸಂಚಾರ ನಿಯಮ ಹಾಗೂ ಸಂಜ್ಞೆಯನ್ನು ಉಲ್ಲಂಘಿಸುವ ವಾಹನ ಚಾಲಕರ ಬಗ್ಗೆ ಊಹೆ ಮಾಡಿ ಸುರಕ್ಷಿತವಾಗಿ ವಾಹನ ಚಾಲನೆ ಮಾಡುವುದು
- ನಿಲುಗಡೆ ರೇಖೆ ಎಂದರೆ ಏನು
ಉ. ಸಂಚಾರಿ ಜಂಕ್ಷನ್ ಅಥವಾ ಪಾದಚಾರಿಗಳು ದಾಟುವ ಸ್ಥಳದಲ್ಲಿ 5 ಇಂಚು ಅಗಲದ ಬಿಳಿ ಅಥವಾ ಹಳದಿ ಪಟ್ಟಿ
- ವಾಹನದ ಇಂಜಿನ್ ಪ್ರಾರಂಭಿಸುವ ಮುನ್ನ
ಉ. ರೇಡಿಯೇಟರ್ ನಲ್ಲಿ ನೀರು ಮತ್ತು ಇಂಜಿನ್ ಆಯಿಲ್ ಮಟ್ಟ ಪರೀಕ್ಷಿಸಬೇಕು
- ಮೋಟಾರ್ ಸೈಕಲ್ ನ ಗರಿಷ್ಟ ವೇಗದ ಮಿತಿ
ಉ. 50 ಕಿ.ಮೀ/ಗಂಟೆಗೆ
- ಶಾಲೆಗಳ ಬಳಿ ಮೋಟಾರ್ ಕಾರಿಗೆ ಅನುಮತಿಸಿದ ಗರಿಷ್ಟ ವೇಗದ ಮಿತಿ
ಉ. 25 ಕಿ.ಮೀ/ಗಂಟೆಗೆ
- ಶಾಲೆಗಳ ಬಳಿ ಮೋಟಾರ್ ಸೈಕಲ್ ಗೆ ಅನುಮತಿಸಿದ ಗರಿಷ್ಟ ವೇಗದ ಮಿತಿ
ಉ. 25 ಕಿ.ಮೀ/ಗಂಟೆಗೆ
- ಲಾರಿ ಲೋಡ್ ಆದಾಗ,
ಉ. ಸರಕು ಹೊರ ಚಾಚಬಾರದು
- ಸರಕು ಸಾಗಣೆ ವಾಹನದ ಹಿಂಬದಿಯಲ್ಲಿ ಇರಬಹುದಾದ ಸರಕಿನ ಗರಿಷ್ಟ ಉದ್ದದ ಮಿತಿ
ಉ. ‘0’ ಸೆಂ.ಮೀ
- ನಗರದಲ್ಲಿ ಭಾರಿ ಮೋಟಾರು ವಾಹನಗಳು ನಿಯಮಾನುಸಾರ ಚಲಿಸಬಹುದಾದ ಗರಿಷ್ಟ ವೇಗದ ಮಿತಿ
ಉ. ಗಂಟೆಗೆ 45 ಕಿ.ಮೀ
- ನಿಯಮಾನುಸಾರ ಎಳೆದೊಯ್ಯುವ ಹಾಗೂ ಎಳೆಯೊಯ್ಯಲ್ಪಡುವ ವಾಹನದ ಮಧ್ಯದಲ್ಲಿನ ಗರಿಷ್ಟ ದೂರದ ಮಿತಿ
ಉ. 5 ಮೀಟರ್
- ನಗರದಲ್ಲಿ ಮೋಟಾರು ಸೈಕಲ್ಲುಗಳು ನಿಯಮಾನುಸಾರ ಚಲಿಸಬಹುದಾದ ಗರಿಷ್ಟ ವೇಗದ ಮಿತಿ
ಉ. ಗಂಟೆಗೆ 40 ಕಿ.ಮೀ
- ನಿಯಮಾನುಸಾರ ಒಂದು ಟೂಯಿಂಗ್ ವಾಹನಕ್ಕೆ ನಿಗದಿಪಡಿಸಿರುವ ಗರಿಷ್ಟ ವೇಗದ ಮಿತಿ
ಉ. ಗಂಟೆಗೆ 24 ಕಿ.ಮೀ
- ಮೋಟಾರು ಸೈಕಲ್ ಅನ್ನು ಗಂಟೆಗೆ 60 ಕಿ.ಮೀ ವೇಗದಲ್ಲಿ ಚಲಿಸಬಹುದಾದ ಸಂದರ್ಭ
ಉ. ಯಾವುದೇ ಸಂದರ್ಭದಲ್ಲಿ ಚಲಿಸುವುದಿಲ್ಲ
97.ನಗರದಲ್ಲಿ ರಾತ್ರಿಯ ವೇಳೆ ಮೋಟಾರು ಸೈಕಲ್ಲನ್ನು ಗಂಟೆಗೆ ನಿಯಮಾನುಸಾರವಾಗಿ ಚಲಿಸಬಹುದಾದ ಗರಿಷ್ಟ ವೇಗದ ಮಿತಿ
ಉ. ಗಂಟೆಗೆ 30 ಕಿ.ಮೀ
- ಸರಕು ಸಾಗಣೆ ವಾಹನವು ನಿಯಮಾನುಸಾರವಾಗಿ ಹೊತ್ತೊಯ್ಯಲು ಅನುಮತಿಸಿರುವ ತೂಕ
ಉ. ರಹದಾರಿಯನ್ವಯ ನೀಡಿರುವ ಅನುಮತಿಯಂತೆ
- ಶಾಲೆಗಳ ಹತ್ತಿರ ಆಟೋರಿಕ್ಷಾ ವಾಹನಗಳು ನಿಯಮಾನುಸಾರವಾಗಿ ಚಲಿಸಬಹುದಾದ ಗರಿಷ್ಟ ವೇಗದ ಮಿತಿ
ಉ. ಗಂಟೆಗೆ 25 ಕಿ.ಮೀ
- ಶಾಲೆಗಳ ಹತ್ತಿರ ಲಘು ಮೋಟಾರು ವಾಹನಗಳು ನಿಯಮಾನುಸಾರವಾಗಿ ಚಲಿಸಬಹುದಾದ ಗರಿಷ್ಟ ವೇಗದ
ಉ. ಗಂಟೆಗೆ 25 ಕಿ.ಮೀ
- ಆಟೋರಿಕ್ಷಾ ನಿಯಮಾನುಸಾರವಾಗಿ ಚಲಿಸಬಹುದಾದ ಗರಿಷ್ಟ ವೇಗದ ಮಿತಿ
ಉ. ಗಂಟೆಗೆ 40 ಕಿ.ಮೀ
- 1988ರ ಕೇಂದ್ರ ಮೋಟಾರು ವಾಹನಗಳ ಕಾಯ್ದೆ ಕಲಂ 112 ರ ಪ್ರಕಾರ
ಉ. ವೇಗದ ಮಿತಿಯನ್ನು ಮೀರುವಂತಿಲ್ಲ
- 1988ರ ಕೇಂದ್ರ ಮೋಟಾರು ವಾಹನಗಳ ಕಾಯ್ದೆ ಕಲಂ 113 ರ ಪ್ರಕಾರ, ಚಾಲಕನು ಯಾವಾಗ ವಾಹನವನ್ನು ಚಾಲನೆ ಮಾಡುವಂತಿಲ್ಲವೆಂದು ನಿಗದಿಪಡಿಸಲಾಗಿದೆ.
ಉ. ಅನುಮತಿಗಿಂತಲೂ ಹೆಚ್ಚಿನ ಭಾರ ಹೇರಿದ ನಂತರ
- ಮೆರವಣಿಗೆಯ ಸ್ಥಳಗಳಲ್ಲಿ ನಿಯಮಾನುಸಾರ ವಾಹನಗಳು ಚಲಿಸಬುದಾದ ಗರಿಷ್ಟ ವೇಗದ ಮಿತಿ
ಉ. ಗಂಟೆಗೆ 15 ಕಿ.ಮೀ
- ಸರಕು ಸಾಗಣೆ ವಾಹನಗಳಲ್ಲಿ ನೆಲಮಟ್ಟದಿಂದ ಹೇರಬಹುದಾದಂತಹ ಸರಕಿನ ಎತ್ತರದ ಮಿತಿ
ಉ. 3.8 ಮೀಟರ್ ಗಳು
- ಶಾಲೆಗಳ ಹತ್ತಿರ ಭಾರಿ ಮೋಟಾರು ವಾಹನಗಳು ನಿಯಮಾನುಸಾರವಾಗಿ ಚಲಿಸಬಹುದಾದ ಗರಿಷ್ಟ ವೇಗದ మితి
ಉ. ಗಂಟೆಗೆ 15 ಕಿ.ಮೀ
- ಶಾಲೆಗಳ ಹತ್ತಿರ ಭಾರಿ ಪ್ರಯಾಣಿಕರ ವಾಹನಗಳು ನಿಯಮಾನುಸಾರವಾಗಿ ಚಲಿಸಬಹುದಾದ ಗರಿಷ್ಟ ವೇಗದ ಮಿತಿ
ಉ. ಗಂಟೆಗೆ 15 ಕಿ.ಮೀ
- 1988ರ ಕೇಂದ್ರ ಮೋಟಾರು ವಾಹನಗಳ ಕಾಯ್ದೆ ಕಲಂ 129 ರ ಪ್ರಕಾರ ಚಾಲಕನು ಮೋಟಾರು ಸೈಕಲ್ಲನ್ನು ಚಾಲನೆ ಮಾಡುವಾಗ
ಉ. ಶಿರಸ್ತ್ರಾಣ (ಹೆಲ್ಮಟ್) ಧರಿಸಿರಬೇಕು
- ಶಾಲೆಗಳ ಹತ್ತಿರ ಮಧ್ಯಮ ಮೋಟಾರು ವಾಹನಗಳು ನಿಯಮಾನುಸಾರವಾಗಿ ಚಲಿಸಬಹುದಾದ ಗರಿಷ್ಟ ವೇಗದ ಮಿತಿ
ಉ. ಗಂಟೆಗೆ 15 ಕಿ.ಮೀ
- ಭಾರಿ ಮೋಟಾರು ವಾಹನ ನಿಯಮಾನುಸಾರ ಚಲಿಸಬಹುದಾದ ಗರಿಷ್ಟ ವೇಗದ ಮಿತಿ
ಉ. ಗಂಟೆಗೆ 65ಕಿ.ಮೀ
- ಸಂಚಾರ ದೀಪದ ನಿಯಂತ್ರಣದಲ್ಲಿರುವ ರಸ್ತೆಯ ಮದ್ಯಂತರದಲ್ಲಿ ನೀವು ಯು-ತಿರುವು ಪಡೆಯಲು ಇಚ್ಛಿಸಿದಲ್ಲಿ
ಉ. ರಸ್ತೆ ಮಧ್ಯಂತರದಲ್ಲಿ ಪೊಲೀಸ್ ಸಿಬ್ಬಂದಿ ಇದ್ದಲ್ಲಿ ತಿರುವು ಪಡೆಯುವುದು
- ಅಡ್ಡಾ ದಿಡ್ಡಿ ಚಾಲನೆಯು
ಉ. ಎಲ್ಲಾ ಸಮಯದಲ್ಲೂ ಎಲ್ಲಾ ಅಪಾಯಕಾರಿ ರೀತಿಯ ವಾಹನ ಚಾಲಕರಿಗೆ
- ನೀವು ಉದ್ದ ಇಳಿಜಾರಿನ ಪ್ರದೇಶದಲ್ಲಿರುತ್ತೀರಿ. ವಾಹನದ ವೇಗವನ್ನು ಹಿಡಿತದಲ್ಲಿಟ್ಟುಕೊಳ್ಳಲು ಸಹಾಯವಾಗಲು ನೀವು ಏನು ಮಾಡಬೇಕು?
ಉ. ಕಡಿಮೆ ವೇಗದ ಗೇರಿಗೆ ಬದಲಾವಣೆ ಮಾಡುವುದು
- ಕಲಿಕಾ ಚಾಲಕರನ್ನು ಮೇಲುಸ್ತುವಾರಿ ಮಾಡಲು ನೀವು
ಉ. ಅನುಮೋದಿತ ಚಾಲನಾ ತರಬೇತುದಾರರಾಗಿರಬೇಕು
- ದ್ವಿಚಕ್ರ ವಾಹನವನ್ನು ಚಾಲನೆ ಮಾಡುವಾಗ ಶಿರಸ್ತ್ರಾಣ (ಹೆಲೈಟ್) ಧರಿಸುವ ಅವಶ್ಯಕತೆ
ಉ. ನಿಮ್ಮ ವೈಯಕ್ತಿಕ ಸುರಕ್ಷತೆಗಾಗಿ
- ನಿಮ್ಮ ವಾಹನದಲ್ಲಿ ಯಾವಾಗ ಶಬ್ದ ಮಾಡಬೇಕು?
ಉ. ನಿಮ್ಮ ವಾಹನಕ್ಕೆ ದಾರಿ ಬಿಡಲು
- ಪ್ರಯಾಣಿಕರನ್ನು ಇಳಿಸಲು ಅಥವಾ ಹತ್ತಿಸಿಕೊಳ್ಳಲು ನಿಲ್ಲಿಸಲಾಗಿರುವ ಬಸ್ಸಿನ ಹಿಂದೆ ಇರುವಾಗ, ನೀವು
ಉ. ತಾಳ್ಮೆಯಿಂದ ಹಿಂದೆ ಕಾಯಬೇಕು
- ರಾತ್ರಿಯ ವೇಳೆಯಲ್ಲಿ ನೀವು ಒಂದು ಕಾರನ್ನು ಓವರ್ ಟೇಕ್ ಮಾಡುವಾಗ ಖಾತ್ರಿಪಡಿಸಿಕೊಳ್ಳಬೇಕಾದ್ದು
ಉ. ವಾಹನವನ್ನು ಓವರ್ ಟೇಕ್ ಮಾಡುವಾಗ ಹೆಡ್ ಲೈಟ್ ಬೆಳಕನ್ನು ಪ್ರಖರಗೊಳಿಸುವುದು
- ರಸ್ತೆಯ ಮಧ್ಯ ಪಥವು
ಉ. ಗಂಟೆಗೆ 40 ಕಿ.ಮೀ ವೇಗದ ಸಂಚಾರಕ್ಕೆ
- ಜೀಬ್ರಾ ಕ್ರಾಸಿಂಗ್ ನಲ್ಲಿ ಪಾದಚಾರಿಗಳು ರಸ್ತೆ ದಾಟಲು ಕಾಯುತ್ತಿರುವುದರಿಂದ ನೀವು ನಿಮ್ಮ ವಾಹನವನ್ನು ನಿಲ್ಲಿಸುತ್ತೀರಿ. ಪಾದಚಾರಿಗಳು ರಸ್ತೆ ದಾಟಲು ಪ್ರಾರಂಭಿಸುವುದಿಲ್ಲ. ಆಗ ನೀವು ಏನು ಮಾಡುತ್ತೀರಿ?
ಉ. ತಾಳ್ಮೆಯಿಂದ ಕಾಯುತ್ತಿರಿ
- ನಿಮ್ಮ ವಾಹನವನ್ನು ನಿಲ್ಲಿಸಬೇಕಾದ ಸಂದರ್ಭದಲ್ಲಿ
- ಬೆಟ್ಟದ ತುದಿಯಲ್ಲಿ
- ಪಾದಚಾರಿ ಮಾರ್ಗದ ಮೇಲೆ
ಉ. ನಿಯಮಾನುಸಾರ ಸುರಕ್ಷಿತ ಸ್ಥಳದಲ್ಲಿ
- ಮಂಜು ಆವರಿಸಿದ ಸಂದರ್ಭಗಳಲ್ಲಿ ಪ್ರಖರವಾದ ದೀಪಗಳನ್ನು ಬೆಳಗಿಸುವುದು
ಉ. ಪ್ರತಿಬಿಂಬಿಸುವುದರಿಂದ ಕೆಟ್ಟ ಪರಿಣಾಮ ಉಂಟಾಗಬಹುದು
- ನಿಮ್ಮ ವಾಹನದ ದೀಪಗಳ ಪ್ರಖರತೆಯನ್ನು ಕಡಿಮೆಗೊಳಿಸುವುದು ಅವಶ್ಯಕವಾಗಿರುತ್ತದೆ
ಉ. ಮಂಜು ಆವರಿಸಿದಾಗ
- ನೀವು ವಾಹನವನ್ನು ಚಾಲನೆ ಮಾಡುತ್ತಿರುವಾಗ ಒಂದು ವಾಹನವು ಹಿಂದಿನಿಂದ ವೇಗವಾಗಿ ದೀಪಗಳನ್ನು ಪ್ರಖರಿಸಿಕೊಂಡು ಬಂದಾಗ ನೀವು
ಉ. ಸುರಕ್ಷಿತವಾಗಿದ್ದಲ್ಲಿ ಆ ವಾಹನ ಓವರ್ ಟೇಕ್ ಮಾಡಿಕೊಂಡು ಮುಂದೆ ಸಾಗಲು ಅನುವು ಮಾಡಿಕೊಡಬೇಕು
- ಮಳೆಯ ಸಂದರ್ಭದಲ್ಲಿ ಚಾಲನೆ ಮಾಡುವಾಗ ನಿಮ್ಮ ಮುಂದಿನ ವಾಹನದಿಂದ ಹೆಚ್ಚು ಅಂತರ ಏಕೆ ಕಾಯ್ದುಕೊಳ್ಳಬೇಕು?
ಉ. ಮುಂದಿನ ವಾಹನವು ಅಚಾನಕ್ಕಾಗಿ ನಿಂತು ಸರಿಯಾಗಿ ಗೋಚರಿಸದಿರುವುದರಿಂದ
